top of page

BlackBuck: 'ಹೋಗೋರನ್ನ ತಡೆಯಲ್ಲ.. ಸರ್ಕಾರವನ್ನ ಬ್ಲ್ಯಾಕ್‌ಮೇಲ್‌ ಮಾಡೋಕೆ ಬರಬೇಡಿ': DCM DK Shivakumar

  • Writer: sumanth newwaves
    sumanth newwaves
  • Sep 18
  • 1 min read

ನಗರದ ಮೂಲಸೌಕರ್ಯಗಳನ್ನು ಸರಿಪಡಿಸಲು ಸರ್ಕಾರ ಬದ್ಧವಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚಲು ನವೆಂಬರ್ ಗಡುವು ನೀಡಲಾಗಿದೆ. ಬೆಂಗಳೂರಿನ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ...

ree

ಬೆಂಗಳೂರು: ಬೆಂಗಳೂರಿನ ಸೌಲಭ್ಯಗಳ ಬಗ್ಗೆ ಅಸಮಾಧಾನವಿದ್ದರೆ ಕಂಪನಿಗಳು ತೊರೆಯಲು ಸ್ವತಂತ್ರವಾಗಿವೆ. ಆದರೆ ಸರ್ಕಾರಕ್ಕೆ ಬೆದರಿಕೆ ಹಾಕಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಗುರುವಾರ ಹೇಳಿದ್ದಾರೆ.

ರಾಷ್ಟ್ರೀಯ ಮಾಧ್ಯಮವೊಂದರ ಜೊತೆ ಸಂದರ್ಶನದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, 'ನಗರದ ಮೂಲಸೌಕರ್ಯಗಳನ್ನು ಸರಿಪಡಿಸಲು ಸರ್ಕಾರ ಬದ್ಧವಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚಲು ನವೆಂಬರ್ ಗಡುವು ನೀಡಲಾಗಿದೆ. ಬೆಂಗಳೂರಿನ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ' ಎಂದರು.

ಇದೇ ವೇಳೆ ಉದ್ಯಮಿಗಳ ಬೆಂಗಳೂರು ತೊರೆಯುವ ಟ್ವೀಟ್ ಕುರಿತು ಮಾತನಾಡಿದ ಡಿಕೆ ಶಿವಕುಮಾರ್, 'ಬೆಂಗಳೂರಿನ ಬಗ್ಗೆ ತೃಪ್ತಿ ಇಲ್ಲವೆಂದು ಹೋಗೋರನ್ನ ತಡೆಯಲ್ಲ. ಆದರೆ, ಸರ್ಕಾರಕ್ಕೆ ಬೆದರಿಸಲು, ಬ್ಯಾಕ್‌ಮೇಲ್‌ ಮಾಡೋಕೆ ಬರಬೇಡಿ. ಕಂಪನಿಗಳು ತಮ್ಮ ಸ್ಥಳವನ್ನು ಬದಲಾಯಿಸುವ ನಿರ್ಧಾರವು ವ್ಯಾಪಾರ ಸಮಸ್ಯೆಗಳ ಕಾರಣದಿಂದಾಗಿರಬಹುದು.

ಬೆಂಗಳೂರು ನೀಡುವ ಸೌಲಭ್ಯಗಳು ಮತ್ತು ಪ್ರತಿಭೆಗಳಿಂದ ತೃಪ್ತರಾಗದಿದ್ದರೆ ಯಾರಾದರೂ ಸ್ಥಳಾಂತರಗೊಳ್ಳಲು ಸ್ವತಂತ್ರರು. ಆದರೆ, ಅವರು ಸರ್ಕಾರವನ್ನು ಬೆದರಿಸಲು ಸಾಧ್ಯವಿಲ್ಲ. ಸರ್ಕಾರವನ್ನು ಬ್ಲ್ಯಾಕ್‌ಮೇಲ್ ಮಾಡುವುದು ಕೆಲಸ ಮಾಡುವುದಿಲ್ಲ. ನಾವು ರಾಜ್ಯದ ಜನರಿಗೆ ಸೇವೆ ಸಲ್ಲಿಸಬೇಕು. ಯಾರೂ ಬೆಂಗಳೂರಿನಿಂದ ಹೊರಹೋಗುವುದಿಲ್ಲ. ಇದನ್ನು ದಾಖಲಿಸಿಕೊಳ್ಳಿ ಎಂದರು.


ಅಂತೆಯೇ ಬೆಂಗಳೂರು ಮತ್ತು ನಾವು ಒದಗಿಸುವ ಮೂಲಸೌಕರ್ಯವನ್ನು ಯಾರೂ ಹೊಂದಿಸಲು ಸಾಧ್ಯವಿಲ್ಲ. ಬೆಂಗಳೂರಿಗೆ ಬರುವ ಮೊದಲು, ಅದು ಏನು ನೀಡುತ್ತದೆ ಎಂಬುದನ್ನು ನೋಡಿದರು. ಆ ನಂತರ ನಿರ್ಧಾರ ತೆಗೆದುಕೊಂಡರು.

ಬೆಂಗಳೂರಿನ ಇತಿಹಾಸದಲ್ಲಿ ಮೊದಲ ಬಾರಿಗೆ 112 ಕಿ.ಮೀ. ಫ್ಲೈಓವರ್‌ಗಳು ಮತ್ತು 44 ಕಿ.ಮೀ.ಗಿಂತ ಹೆಚ್ಚು ಎತ್ತರದ ಡಬಲ್ ಡೆಕ್ಕರ್ ರಸ್ತೆಗಳನ್ನು ನಿರ್ಮಿಸುತ್ತಿದ್ದೇವೆ. ಈ ಕೆಲಸ ಶೀಘ್ರದಲ್ಲಿಯೇ ಮುಕ್ತಾಯವಾಗಲಿವೆ. ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ ಮತ್ತು ಪ್ರತಿದಿನ ನೂರಾರು ಕಂಪನಿಗಳು ಇಲ್ಲಿಗೆ ಬರುತ್ತಿವೆ ಎಂದು ಹೇಳಿದರು.


ನವೆಂಬರ್‌ ಗಡುವು

ನಾನು ಅಧಿಕಾರಿಗಳಿಗೆ ಬದ್ಧತೆಯಿಂದ ಕೆಲಸ ಮಾಡಿ ಸಮಸ್ಯೆ ಬಗೆ ಹರಿಸಲು ತಿಳಿಸಿದ್ದೇನೆ. ಹಣ ಬಿಡುಗಡೆಯಾಗಿದೆ. ಗುತ್ತಿಗೆದಾರರು ಕೆಲಸ ಕೈಗೊಂಡಿದ್ದಾರೆ. ಬೆಂಗಳೂರಿನ ಸ್ವಚ್ಛತೆ ಮತ್ತು ಗುಂಡಿಗಳನ್ನು ಸರಿಪಡಿಸುವುದು ನಮ್ಮ ಆದ್ಯತೆಯಾಗಿದೆ. ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆಯನ್ನು ಬಗೆಹರಿಸಲು ನವೆಂಬರ್ ಒಳಗೆ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಗುತ್ತಿಗೆದಾರರಿಗೆ ಅಂತಿಮ ಗಡುವು ನೀಡಲಾಗಿದೆ. ಸ್ವಚ್ಛ ಬೆಂಗಳೂರು ಹಾಗೂ ಸುಗಮ ಸಂಚಾರವೇ ನಮ್ಮ ಗುರಿಯಾಗಿರುವುದರಿಂದ ಆದಷ್ಟು ಬೇಗ ರಸ್ತೆ ಗುಂಡಿಗಳಿಗೆ ಜಿಬಿಎ ಮುಕ್ತಿ ನೀಡಲಿದೆ " ಎಂದು ಭರವಸೆ ನೀಡಿದ್ದಾರೆ.


Comments


ಹೆಚ್ಚು ಓದಿದ ಸುದ್ದಿ

ಚಿನಕುರುಳಿ: ಗುರುವಾರ, ಏಪ್ರಿಲ್ 10, 2025

 

ಬೆಂಗಳೂರು: ನಾಮಕರಣಕ್ಕೆ ಹೊರಟವರು ಸಾವಿನ ಮನೆಗೆ

 

IPL 2025 | ಡೆಲ್ಲಿಗೆ ಸತತ 4ನೇ ಜಯ; ತವರಿನಲ್ಲಿ ಮತ್ತೆ ಮುಗ್ಗರಿಸಿದ ಆರ್‌ಸಿಬಿ

 

ಚುರುಮುರಿ: ಸಂಬಳದ ಜೋಕು!

ಕ್ರೀಡೆ

IPL 2025 ಕಳಪೆ ಸಾಧನೆ: ತವರಿನ ಅಂಗಳ ಚಿನ್ನಸ್ವಾಮಿಯಲ್ಲಿ ಆರ್‌ಸಿಬಿಗೆ 45ನೇ ಸೋಲು!

 

ಸಿನಿಮಾ ರಂಗಕ್ಕೆ ಕಾಲಿಟ್ಟ ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ!

 

IPL 2025:ಪಾಟೀದಾರ್ ನಾಯಕತ್ವದ ಬಗ್ಗೆ ಮೈದಾನದಲ್ಲೇ ಅಸಮಾಧಾನ ತೋಡಿಕೊಂಡ ಕೊಹ್ಲಿ?

 

IPL 2025 | RCB vs DC: ಇದು ನನ್ನ ನೆಲ ಎಂದ ರಾಹುಲ್‌

ಒಳನೋಟ

ಒಳನೋಟ | ಪ್ರತಿಸುಂಕ: ರಾಜ್ಯದಲ್ಲೂ ಕಂಪನ

 

ಒಳನೋಟ | ಅನ್ನದ ಬಟ್ಟಲಿಗೆ ಕನ್ನ...

 

ಒಳನೋಟ | ಆಹಾರ ಪಾರ್ಕ್: ಆಮೆ ನಡಿಗೆ

 

ಒಳನೋಟ: ಮೀನು ‘ಬರ’ ನಾಡದೋಣಿಗೆ ‘ಗರ’

ಟ್ರೆಂಡಿಂಗ್

ಚಿನಕುರುಳಿ: ಗುರುವಾರ, ಏಪ್ರಿಲ್ 10, 2025

 

ಬೆಂಗಳೂರು: ನಾಮಕರಣಕ್ಕೆ ಹೊರಟವರು ಸಾವಿನ ಮನೆಗೆ

 

IPL 2025 | ಡೆಲ್ಲಿಗೆ ಸತತ 4ನೇ ಜಯ; ತವರಿನಲ್ಲಿ ಮತ್ತೆ ಮುಗ್ಗರಿಸಿದ ಆರ್‌ಸಿಬಿ

 

ದ್ರಾವಿಡ್ ಕುರಿತಂತೆ ಭಾವನಾತ್ಮಕ ಸಂದೇಶ ಹಂಚಿಕೊಂಡ ರೋಹಿತ್ ಶರ್ಮಾ

  • White Facebook Icon
bottom of page