top of page

ಬೆಂಗಳೂರು: ರಾತ್ರಿಯಿಡೀ ಸುರಿದ ಭಾರಿ ಮಳೆಗೆ ಹಲವೆಡೆ ಜಲಾವೃತ, ಜನರ ಪರದಾಟ; IMD ಮುನ್ಸೂಚನೆ ಏನು?

  • Writer: sumanth newwaves
    sumanth newwaves
  • Sep 19, 2025
  • 1 min read

ಭಾರತೀಯ ಹವಾಮಾನ ಇಲಾಖೆ (IMD) ಬೆಂಗಳೂರಿಗೆ ಯೆಲ್ಲೂ ಆಲರ್ಟ್ ನೀಡಿದೆ. ಅಲ್ಲಲ್ಲಿ ಗಂಟೆಗೆ 30-40 ಕಿಮೀ ವೇಗದಲ್ಲಿ ಮಿಂಚು ಮತ್ತು ಬಿರುಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ.

ಬೆಂಗಳೂರು: ಗುರುವಾರ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ರಾಜಧಾನಿ ಬೆಂಗಳೂರಿನ ಜನಜೀವನ ಅಸ್ತವ್ಯಸ್ತಗೊಂಡಿತು. ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡು, ಸಂಚಾರ ದಟ್ಟಣೆ ಉಂಟಾಗಿ, ಜನರು ಪರದಾಡುವಂತಾಯಿತು. ನಿನ್ನೆ ಸಂಜೆಯಿಂದ ಆರಂಭವಾದ ಮಳೆ, ರಾತ್ರಿಯಿಡೀ ಸುರಿದಿದ್ದು, ಬೆಳಗ್ಗೆ ಸ್ವಲ್ಪ ಬಿಡುವು ನೀಡಿದೆ.

ಬೆಂಗಳೂರು ನಗರದಲ್ಲಿ ಕಳೆದ 24 ಗಂಟೆಗಳಲ್ಲಿ ಮುಂಜಾನೆ 5.30 ರವರೆಗೆ ಕ 65.5 ಮಿಮೀ ಮಳೆ ದಾಖಲಾಗಿದೆ. ನಗರದ ಸ್ವಯಂಚಾಲಿತ ಹವಾಮಾನ ಕೇಂದ್ರ (AWS) 66 ಮಿಮೀ ಮಳೆಯಾಗಿರುವುದಾಗಿ ವರದಿ ಮಾಡಿದೆ. ದೊಡ್ಡಬಳ್ಳಾಪುರದಲ್ಲಿ 60 ಮಿ.ಮೀ, ರಾಮನಗರದ ಚಂದೂರಾಯನಹಳ್ಳಿಯಲ್ಲಿ 46 ಮಿ.ಮೀ, ಬೆಂಗಳೂರು ಗ್ರಾಮಾಂತರದ ಹೆಸರಘಟ್ಟದಲ್ಲಿ 43 ಮಿ.ಮೀ ಮಳೆಯಾಗಿದೆ.

ಭಾರತೀಯ ಹವಾಮಾನ ಇಲಾಖೆ (IMD) ಬೆಂಗಳೂರಿಗೆ ಯೆಲ್ಲೂ ಆಲರ್ಟ್ ನೀಡಿದೆ. ಅಲ್ಲಲ್ಲಿ ಗಂಟೆಗೆ 30-40 ಕಿಮೀ ವೇಗದಲ್ಲಿ ಮಿಂಚು ಮತ್ತು ಬಿರುಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ.

ವಿಜಯಪುರ, ಬೀದರ್, ಕಲಬುರಗಿ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲೂ ಯೆಲ್ಲೂ ಆಲರ್ಟ್ ಘೋಷಿಸಲಾಗಿದೆ. ಕರ್ನಾಟಕದಾದ್ಯಂತ ಗಮನಾರ್ಹ ಮಳೆಯಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಪ್ರಕಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಕನಗಮಕಲಪಲ್ಲಿಯಲ್ಲಿ 130 ಮಿಮೀ, ತಿರುಮಣಿ (114 ಮಿಮೀ), ಬೀಚಗಾನಹಳ್ಳಿ (114 ಮಿಮೀ), ಚೇಳೂರು (101 ಮಿಮೀ), ಮತ್ತು ಬೀದರ್ ಜಿಲ್ಲೆಯ ಭಂಡಾರಕುಂಠ (112 ಮಿ ಮೀ) ಮಳೆ ದಾಖಲಾಗಿದೆ.

ಗದಗದಲ್ಲಿ 51.9 ಮಿ.ಮೀ, ರಾಮನಗರದ ಚಂದೂರಾಯನಹಳ್ಳಿಯಲ್ಲಿ 46 ಮಿ.ಮೀ, ಕೋಲಾರದ ಟಮಕದಲ್ಲಿ 21.5 ಮಿ.ಮೀ, ಮಂಗಳೂರಿನಲ್ಲಿ 20.7 ಮಿ.ಮೀ ಮಳೆಯಾಗಿದೆ. ಭಾರೀ ಮಳೆಯಿಂದಾಗಿ ತಾತ್ಕಾಲಿಕ ವಿದ್ಯುತ್ ಕಡಿತ, ನೀರು ಪೂರೈಕೆ ಸ್ಥಗಿತ ಮತ್ತು ದುರ್ಬಲವಾದ ಮರದ ಕೊಂಬೆ ಬೀಳಬಹುದು ಎಂದು IMD ಎಚ್ಚರಿಸಿದೆ.


Comments


ಹೆಚ್ಚು ಓದಿದ ಸುದ್ದಿ

ಚಿನಕುರುಳಿ: ಗುರುವಾರ, ಏಪ್ರಿಲ್ 10, 2025

 

ಬೆಂಗಳೂರು: ನಾಮಕರಣಕ್ಕೆ ಹೊರಟವರು ಸಾವಿನ ಮನೆಗೆ

 

IPL 2025 | ಡೆಲ್ಲಿಗೆ ಸತತ 4ನೇ ಜಯ; ತವರಿನಲ್ಲಿ ಮತ್ತೆ ಮುಗ್ಗರಿಸಿದ ಆರ್‌ಸಿಬಿ

 

ಚುರುಮುರಿ: ಸಂಬಳದ ಜೋಕು!

ಕ್ರೀಡೆ

IPL 2025 ಕಳಪೆ ಸಾಧನೆ: ತವರಿನ ಅಂಗಳ ಚಿನ್ನಸ್ವಾಮಿಯಲ್ಲಿ ಆರ್‌ಸಿಬಿಗೆ 45ನೇ ಸೋಲು!

 

ಸಿನಿಮಾ ರಂಗಕ್ಕೆ ಕಾಲಿಟ್ಟ ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ!

 

IPL 2025:ಪಾಟೀದಾರ್ ನಾಯಕತ್ವದ ಬಗ್ಗೆ ಮೈದಾನದಲ್ಲೇ ಅಸಮಾಧಾನ ತೋಡಿಕೊಂಡ ಕೊಹ್ಲಿ?

 

IPL 2025 | RCB vs DC: ಇದು ನನ್ನ ನೆಲ ಎಂದ ರಾಹುಲ್‌

ಒಳನೋಟ

ಒಳನೋಟ | ಪ್ರತಿಸುಂಕ: ರಾಜ್ಯದಲ್ಲೂ ಕಂಪನ

 

ಒಳನೋಟ | ಅನ್ನದ ಬಟ್ಟಲಿಗೆ ಕನ್ನ...

 

ಒಳನೋಟ | ಆಹಾರ ಪಾರ್ಕ್: ಆಮೆ ನಡಿಗೆ

 

ಒಳನೋಟ: ಮೀನು ‘ಬರ’ ನಾಡದೋಣಿಗೆ ‘ಗರ’

ಟ್ರೆಂಡಿಂಗ್

ಚಿನಕುರುಳಿ: ಗುರುವಾರ, ಏಪ್ರಿಲ್ 10, 2025

 

ಬೆಂಗಳೂರು: ನಾಮಕರಣಕ್ಕೆ ಹೊರಟವರು ಸಾವಿನ ಮನೆಗೆ

 

IPL 2025 | ಡೆಲ್ಲಿಗೆ ಸತತ 4ನೇ ಜಯ; ತವರಿನಲ್ಲಿ ಮತ್ತೆ ಮುಗ್ಗರಿಸಿದ ಆರ್‌ಸಿಬಿ

 

ದ್ರಾವಿಡ್ ಕುರಿತಂತೆ ಭಾವನಾತ್ಮಕ ಸಂದೇಶ ಹಂಚಿಕೊಂಡ ರೋಹಿತ್ ಶರ್ಮಾ

  • White Facebook Icon
bottom of page