top of page

ಅಯೋಧ್ಯೆ ರಾಮನ ಸೂರ್ಯ ತಿಲಕದ ಹಿಂದಿದೆ ವಿಜ್ಞಾನ ಕೌತುಕ: ಇಲ್ಲಿದೆ ಕುತೂಹಲಕಾರಿ ಮಾಹಿತಿ

  • Writer: sumanth newwaves
    sumanth newwaves
  • Nov 27, 2024
  • 2 min read

Updated: Sep 24

ಅತ್ಯಾಧುನಿಕ ವೈಜ್ಞಾನಿಕ ಪರಿಣತಿಯನ್ನು ಬಳಸಿಕೊಂಡು ಈ ಪ್ರಯೋಗವನ್ನು ಮಾಡಲಾಗಿದೆ. 5.8 ಸೆಂಟಿಮೀಟರ್ ನ ಬೆಳಕಿನ ಕಿರಣ ರಾಮಲಲ್ಲಾ ವಿಗ್ರಹದ ಹಣೆಯ ಭಾಗವನ್ನು ಸ್ಪರ್ಶಿಸುವಂತೆ ಈ ತಂತ್ರಜ್ಞಾನವನ್ನು ವಿನ್ಯಾಸ ಮಾಡಲಾಗಿದೆ.

ree


ಇಂದು ಶ್ರೀರಾಮ ನವಮಿ. ಅಯೋಧ್ಯೆಯ ರಾಮ ಮಂದಿರದಲ್ಲಿ ಸಹಸ್ರಾರು ವರ್ಷಗಳ ಬಳಿಕ ಮೊದಲ ಬಾರಿಗೆ ವಿಜೃಂಭಣೆಯಿಂದ ನಡೆದಿದೆ. ಮಧ್ಯಾಹ್ನದ ವೇಳೆಗೆ ಸೂರ್ಯ ತಿಲಕ ರಾಮಲಲ್ಲಾ ವಿಗ್ರಹದ ಹಣೆಯನ್ನು ಬೆಳಗಿದ್ದು, ಇದರ ಹಿಂದಿರುವ ವಿಜ್ಞಾನ ಕೌತುಕದ ಕುತೂಹಲ ಮೂಡಿದೆ.

ಅತ್ಯಾಧುನಿಕ ವೈಜ್ಞಾನಿಕ ಪರಿಣತಿಯನ್ನು ಬಳಸಿಕೊಂಡು ಈ ಪ್ರಯೋಗವನ್ನು ಮಾಡಲಾಗಿದೆ. 5.8 ಸೆಂಟಿಮೀಟರ್ ನ ಬೆಳಕಿನ ಕಿರಣ ರಾಮಲಲ್ಲಾ ವಿಗ್ರಹದ ಹಣೆಯ ಭಾಗವನ್ನು ಸ್ಪರ್ಶಿಸುವಂತೆ ಈ ತಂತ್ರಜ್ಞಾನವನ್ನು ವಿನ್ಯಾಸ ಮಾಡಲಾಗಿದೆ. ಈ ಗಮನಾರ್ಹ ವಿದ್ಯಮಾನವನ್ನು ಸಾಧಿಸಲು ವಿಶೇಷ ಉಪಕರಣವನ್ನು ವಿನ್ಯಾಸಗೊಳಿಸಲಾಗಿದೆ. ಇದಕ್ಕಾಗಿ 10 ಮಂದಿ ಭಾರತೀಯ ವಿಜ್ಞಾನಿಗಳು ರಾಮ ಮಂದಿರದಲ್ಲಿ ಕೆಲಸ ಮಾಡಿದ್ದು, ರಾಮನವಮಿ ದಿನದಂದು ಈ ಕೌತುಕ ನಡೆಯುವುದನ್ನು ಖಾತ್ರಿಪಡಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. ರಾಮನವಮಿಯ ಮಧ್ಯಾಹ್ನ 12 ಗಂಟೆಗೆ 3-3.5 ನಿಮಿಷದ ವರೆಗೆ ನ ಬೆಳಕಿನ ಕಿರಣ ರಾಮಲಲ್ಲಾ ವಿಗ್ರಹದ ಹಣೆಯ ಭಾಗವನ್ನು ಸ್ಪರ್ಶಿಸಿತ್ತು.


ಕನ್ನಡಿಗಳು ಮತ್ತು ಲೆನ್ಸ್ ಗಳ (mirrors and lenses) ಸಹಾಯದಿಂದ ಈ ವಿದ್ಯಮಾನ ನಡೆಯುವಂತೆ ಮಾಡಲಾಗಿದೆ. ಕನ್ನಡಿಗಳು ಮತ್ತು ಲೆನ್ಸ್ ಗಳನ್ನೊಳಗೊಂಡ ಉಪಕರಣವನ್ನು ವಿಜ್ಞಾನಿಗಳು ತಯಾರಿಸಿದ್ದು, ಇದಕ್ಕೆ ಸೂರ್ಯ ತಿಲಕ ಕಾರ್ಯವಿಧಾನ ಎಂದು ಕರೆಯಲಾಗಿದೆ. ರೂರ್ಕಿಯ ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ (CBRI) ಯ ವಿಜ್ಞಾನಿ ಮತ್ತು ನಿರ್ದೇಶಕ ಡಾ. ಪ್ರದೀಪ್ ಕುಮಾರ್ ರಾಮಚಾರ್ಲ ಈ ವಿಜ್ಞಾನದ ಬಗ್ಗೆ ವಿವರಣೆ ನೀಡಿದ್ದಾರೆ.

ಸೂರ್ಯ ತಿಲಕ ಕಾರ್ಯವಿಧಾನ ಆಪ್ಟೋ- ಮೆಕಾನಿಕಲ್ ವ್ಯವಸ್ಥೆಯಿಂದ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ನಾಲ್ಕು ಕನ್ನಡಿಗಳು (mirrors) ಹಾಗೂ ನಾಲ್ಕು ಲೆನ್ಸ್ ಗಳನ್ನು ಟಿಲ್ಟ್ ಯಾಂತ್ರಿಕತೆ ಮತ್ತು ಪೈಪಿಂಗ್ ವ್ಯವಸ್ಥೆಯಲ್ಲಿ ಅಳವಡಿಸಲಾಗಿದೆ. ಸೂರ್ಯನ ಕಿರಣಗಳನ್ನು ಗರ್ಭ ಗೃಹ (ವಿಗ್ರಹವಿರುವ ಸ್ಥಳ)ಕ್ಕೆ ತಿರುಗಿಸಲು ದೇವಾಲಯದ ಮೇಲಿನ ಮಹಡಿಯಲ್ಲಿ ಟಿಲ್ಟ್ ಯಾಂತ್ರಿಕತೆಗೆ ಅಪಾರ್ಚರ್ (ಬೆಳಕಿಂಡಿ) ನ್ನು ಅಳವಡಿಸಲಾಗಿದೆ ಎಂದು ಡಾ.ರಾಮಚಾರ್ಲ ವಿವರಿಸಿದ್ದಾರೆ.

ರಾಮ ನವಮಿ ವಿಶೇಷ: ಅಯೋಧ್ಯೆ ಬಾಲ ರಾಮನ ಹಣೆ ಬೆಳಗಿದ ಸೂರ್ಯ ತಿಲಕ!

ಅಂತಿಮವಾಗಿ ಲೆನ್ಸ್ ಮತ್ತು ಕನ್ನಡಿ ಸೂರ್ಯ ಕಿರಣಗಳನ್ನು ಶ್ರೀರಾಮನ ಹಣೆಯ ಮೇಲೆ ಬೆಳಕನ್ನು ಫೋಕಸ್ ಮಾಡುತ್ತವೆ. ಪ್ರತಿ ರಾಮನವಮಿಯ ದಿನದಂದು ರಾಮನ ಹಣೆಗೆ ಸೂರ್ಯ ರಶ್ಮಿ ಸ್ಪರ್ಶಿಸುವಂತೆ ಮಾಡಲು ಸೂರ್ಯನ ಬೆಳಕನ್ನು ಉತ್ತರದ ದಿಕ್ಕಿನೆಡೆಗೆ, 2ನೇ ಕನ್ನಡಿಗೆ ಕಳುಹಿಸುವ ಮೊದಲ ಕನ್ನಡಿಯ ಟಿಲ್ಟ್ ನ್ನು ಸರಿಹೊಂದಿಸುವುದಕ್ಕೆ ಟಿಲ್ಟ್ ವಿಧಾನವನ್ನು ಬಳಸಲಾಗಿದೆ.

ಎಲ್ಲಾ ಕೊಳವೆಗಳು ಮತ್ತು ಇತರ ಭಾಗಗಳನ್ನು ಹಿತ್ತಾಳೆ ವಸ್ತುಗಳನ್ನು ಬಳಸಿ ತಯಾರಿಸಲಾಗಿದೆ. ಕನ್ನಡಿಗಳು ಮತ್ತು ಲೆನ್ಸ್ ಗಳು ಉತ್ತಮ ಗುಣಮಟ್ಟದ ಮತ್ತು ದೀರ್ಘಕಾಲ ಉಳಿಯಲು ಬಾಳಿಕೆ ಬರುವಂತಹದ್ದಾಗಿದೆ. ಪೈಪ್‌ಗಳು, ಎಲ್ಬೋಗಳು ಸೂರ್ಯನ ಬೆಳಕನ್ನು ಹರಡುವುದನ್ನು ತಪ್ಪಿಸಲು ಕಪ್ಪು ಪುಡಿ-ಲೇಪಿತವಾಗಿವೆ. ಅಲ್ಲದೆ, ಮೇಲ್ಭಾಗದಲ್ಲಿ, ಸೂರ್ಯನ ಶಾಖದ ಅಲೆಗಳನ್ನು ವಿಗ್ರಹದ ಹಣೆಯ ಮೇಲೆ ಬೀಳದಂತೆ ನಿರ್ಬಂಧಿಸಲು ಇನ್ಫ್ರಾರೆಡ್ ಫಿಲ್ಟರ್ ಗ್ಲಾಸ್ ಅನ್ನು ಬಳಸಲಾಗುತ್ತದೆ,” ಎಂದು ವಿಜ್ಞಾನಿಗಳು ಹೇಳಿದ್ದಾರೆ.

ರೂರ್ಕಿಯ CBRI ಮತ್ತು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIAP) ಯ ವಿಜ್ಞಾನಿಗಳ ನಡುವಿನ ಸಹಯೋಗದಲ್ಲಿ 'ಸೂರ್ಯ ತಿಲಕ್' ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಲಾಗಿದೆ.

ಈ ಕಾರ್ಯವಿಧಾನದಲ್ಲಿ ವಿಶೇಷ ಗೇರ್ ಬಾಕ್ಸ್ ಗಳನ್ನು ಬಳಕೆ ಮಾಡಲಾಗಿದ್ದು, ಸೋಲಾರ್ ಟ್ರ್ಯಾಕಿಂಗ್ ತತ್ವದ 3 ನೇ ಮಹಡಿಯಿಂದ ಗರ್ಭಗೃಹಕ್ಕೆ ಸೂರ್ಯನ ಕಿರಣ ಪ್ರತಿಫಲನದ ಸಾಮರ್ಥ್ಯ ಹೊಂದಿರುವ ಕನ್ನಡಿ ಹಾಗೂ ಲೆನ್ಸ್ ಗಳನ್ನು ಬಳಕೆ ಮಾಡಲಾಗಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್‌ನ ತಾಂತ್ರಿಕ ಬೆಂಬಲ ಮತ್ತು ಬೆಂಗಳೂರು ಮೂಲದ ಕಂಪನಿಯಾದ ಆಪ್ಟಿಕಾದ ಉತ್ಪಾದನಾ ಪರಿಣತಿಯು ಈ ಯೋಜನೆಯನ್ನು ಕಾರ್ಯಗತಗೊಳಿಸಲು ಮತ್ತಷ್ಟು ಸಹಾಯ ಮಾಡಿದೆ.

ವಿದ್ಯುತ್, ಬ್ಯಾಟರಿಗಳು ಅಥವಾ ಕಬ್ಬಿಣ-ಆಧಾರಿತ ಘಟಕಗಳನ್ನು ಅವಲಂಬಿಸದೆ ರಾಮನವಮಿಯ ದಿನದಂದು ಸೂರ್ಯ ರಶ್ಮಿ ರಾಮನ ಹಣೆಯನ್ನು ಸ್ಪರ್ಶಿಸುವ ವಿದ್ಯಮಾನ ನಡೆಯುವಂತೆ ಮಾಡಲು 19 ಗೇರ್ ಗಳನ್ನು ಬಳಕೆ ಮಾಡಲಾಗಿದೆ.

ಖಗೋಳಶಾಸ್ತ್ರದ ಕ್ಷೇತ್ರದಲ್ಲಿ ಭಾರತದ ಪ್ರಮುಖ ಸಂಸ್ಥೆ, ಬೆಂಗಳೂರಿನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA), ಚಂದ್ರ ಮತ್ತು ಸೌರ (ಗ್ರೆಗೋರಿಯನ್) ಕ್ಯಾಲೆಂಡರ್‌ಗಳ ನಡುವಿನ ಸ್ಪಷ್ಟವಾದ ವ್ಯತ್ಯಾಸಗಳನ್ನು ಸಮನ್ವಯಗೊಳಿಸಲು ಪರಿಹಾರವನ್ನು ರೂಪಿಸಿದೆ. "ನಾವು ಖಗೋಳಶಾಸ್ತ್ರದಲ್ಲಿ (positional astronomy) ಅಗತ್ಯವಾದ ಪರಿಣತಿಯನ್ನು ಹೊಂದಿದ್ದೇವೆ" ಎಂದು IIA ಯ ನಿರ್ದೇಶಕಿ ಡಾ ಅನ್ನಪೂರ್ಣಿ ಸುಬ್ರಮಣ್ಯಂ ವಿವರಿಸಿದ್ದಾರೆ. "ರಾಮನವಮಿಯಂದು ಸೂರ್ಯ ತಿಲಕದಿಂದ ಸಂಕೇತಿಸಲ್ಪಟ್ಟ ಸೂರ್ಯನ ಕಿರಣಗಳು ರಾಮ ಲಾಲಾ ವಿಗ್ರಹವನ್ನು ಖಚಿತಪಡಿಸಿಕೊಳ್ಳಲು ಈ ಪರಿಣತಿಯನ್ನು ಅನ್ವಯಿಸಲಾಗಿದೆ.

ಇದೇ ರೀತಿಯ 'ಸೂರ್ಯ ತಿಲಕ' ಕಾರ್ಯವಿಧಾನವು ಈಗಾಗಲೇ ಕೆಲವು ಜೈನ ದೇವಾಲಯಗಳಲ್ಲಿ ಮತ್ತು ಕೋನಾರ್ಕ್‌ನಲ್ಲಿರುವ ಸೂರ್ಯ ದೇವಾಲಯದಲ್ಲಿ ಅಸ್ತಿತ್ವದಲ್ಲಿದೆ, ಆದರೆ ಅವುಗಳನ್ನು ವಿಭಿನ್ನವಾಗಿ ವಿನ್ಯಾಸಗೊಳಿಸಲಾಗಿದೆ.

Comments


ಹೆಚ್ಚು ಓದಿದ ಸುದ್ದಿ

ಚಿನಕುರುಳಿ: ಗುರುವಾರ, ಏಪ್ರಿಲ್ 10, 2025

 

ಬೆಂಗಳೂರು: ನಾಮಕರಣಕ್ಕೆ ಹೊರಟವರು ಸಾವಿನ ಮನೆಗೆ

 

IPL 2025 | ಡೆಲ್ಲಿಗೆ ಸತತ 4ನೇ ಜಯ; ತವರಿನಲ್ಲಿ ಮತ್ತೆ ಮುಗ್ಗರಿಸಿದ ಆರ್‌ಸಿಬಿ

 

ಚುರುಮುರಿ: ಸಂಬಳದ ಜೋಕು!

ಕ್ರೀಡೆ

IPL 2025 ಕಳಪೆ ಸಾಧನೆ: ತವರಿನ ಅಂಗಳ ಚಿನ್ನಸ್ವಾಮಿಯಲ್ಲಿ ಆರ್‌ಸಿಬಿಗೆ 45ನೇ ಸೋಲು!

 

ಸಿನಿಮಾ ರಂಗಕ್ಕೆ ಕಾಲಿಟ್ಟ ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ!

 

IPL 2025:ಪಾಟೀದಾರ್ ನಾಯಕತ್ವದ ಬಗ್ಗೆ ಮೈದಾನದಲ್ಲೇ ಅಸಮಾಧಾನ ತೋಡಿಕೊಂಡ ಕೊಹ್ಲಿ?

 

IPL 2025 | RCB vs DC: ಇದು ನನ್ನ ನೆಲ ಎಂದ ರಾಹುಲ್‌

ಒಳನೋಟ

ಒಳನೋಟ | ಪ್ರತಿಸುಂಕ: ರಾಜ್ಯದಲ್ಲೂ ಕಂಪನ

 

ಒಳನೋಟ | ಅನ್ನದ ಬಟ್ಟಲಿಗೆ ಕನ್ನ...

 

ಒಳನೋಟ | ಆಹಾರ ಪಾರ್ಕ್: ಆಮೆ ನಡಿಗೆ

 

ಒಳನೋಟ: ಮೀನು ‘ಬರ’ ನಾಡದೋಣಿಗೆ ‘ಗರ’

ಟ್ರೆಂಡಿಂಗ್

ಚಿನಕುರುಳಿ: ಗುರುವಾರ, ಏಪ್ರಿಲ್ 10, 2025

 

ಬೆಂಗಳೂರು: ನಾಮಕರಣಕ್ಕೆ ಹೊರಟವರು ಸಾವಿನ ಮನೆಗೆ

 

IPL 2025 | ಡೆಲ್ಲಿಗೆ ಸತತ 4ನೇ ಜಯ; ತವರಿನಲ್ಲಿ ಮತ್ತೆ ಮುಗ್ಗರಿಸಿದ ಆರ್‌ಸಿಬಿ

 

ದ್ರಾವಿಡ್ ಕುರಿತಂತೆ ಭಾವನಾತ್ಮಕ ಸಂದೇಶ ಹಂಚಿಕೊಂಡ ರೋಹಿತ್ ಶರ್ಮಾ

  • White Facebook Icon
bottom of page